India
oi-Reshma P
ತಮಿಳುನಾಡು,ಜನವರಿ 23: ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಕಿಲ್ವೀಡಿ ಗ್ರಾಮದ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದು ನಾಲ್ಕು ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಯಲ್ಲಿ 39 ವರ್ಷದ ಕೆ.ಮುತ್ತುಕುಮಾರನ್, 40 ವರ್ಷದ ಎಸ್.ಭೂಪಾಲನ್ ಹಾಗೂ 17 ವರ್ಷದ ಬಿ ಜ್ಯೋತಿಬಾಬು ಸೇರಿದಂತೆ ಒಟ್ಟು ನಾಲ್ವರು ಸಾವಿಗೀಡಾಗಿದ್ದಾರೆ.
ಇದು ಪೊಂಗಲ್ ಹಬ್ಬದ ನಂತರದ ಸಾಂಪ್ರದಾಯಿಕ ಉತ್ಸವವಾಗಿದೆ. ಅರಕ್ಕೋಣಂ ಬಳಿಯ ದ್ರೌಪತಿ ಮತ್ತು ಮಂಡಿಯಮ್ಮನ್ ದೇವಾಲಯಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ಕ್ರೇನ್ ಮೇಲೇರುತ್ತಾರೆ. ಈ ರೀತಿ ಕ್ರೇನ್ನಲ್ಲಿ ನೇತಾಡುತ್ತ ದೇವರು ಮತ್ತು ದೇವಿಗೆ ಹಾರ ಹಾಕುತ್ತಾರೆ.
ಭಾನುವಾರ ರಾತ್ರಿ 8 ಗಂಟೆಗೆ ದೇವಿಗೆ ಹಾರ ಹಾಕಲು ಸಿದ್ಧರಾಗಿ ಕ್ರೇನ್ನಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಈ ಸಂದರ್ಭದಲ್ಲಿ ಕ್ರೇನ್ ಇದ್ದಕ್ಕಿದ್ದಂತೆ ಕುಸಿದಿದೆ. ಈ ವೇಳೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಒಬ್ಬರು ಇಂದು(ಸೋಮವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. ಒಂಬತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡನವರಿಗೆ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಇನ್ನೂ ಕ್ರೇನ್ ಕುಸಿದು ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಕ್ರೇನ್ ಕುಸಿದು ಬಿದ್ದಿದೆ ಮತ್ತು ಸಿಕ್ಕಿಬಿದ್ದವರನ್ನು ರಕ್ಷಿಸಲು ಜನರು ಕಿರುಚುತ್ತಿರುವುದನ್ನು ತೋರಿಸಿದೆ. ಪೊಲೀಸರು ಧಾವಿಸಿ ಗಾಯಗೊಂಡವರನ್ನು ಅರಕ್ಕೊನಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಪೋಲಿಸರು ಆಗಮಿಸಿದಾಗ ಮೂರು ಜನರನ್ನು ಮೃತಪಟ್ಟಿದ್ದರು ಮತ್ತು ಉಳಿದವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಈ ದೇವಸ್ಥಾನದ ಜಾತ್ರೆಯಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಪಡೆದಿರಲಿಲ್ಲ. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಹ ಮಾಹಿತಿ ನೀಡಿರಲಿಲ್ಲವಂತೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೇನ್ ಆಪರೇಟರ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದೇವಾಲಯಕ್ಕೆ ಹೋಗುವ ರಸ್ತೆ ಕಳಪೆಯಾಗಿತ್ತು, ಕ್ರೇನ್ ದುರಂತದಿಂದ ನಾಲ್ವರು ಗಾಯಗೊಂಡಿದ್ದು, ಅರಕ್ಕೊನಮ್, ಕಾಂಚೀಪುರಂ ಮತ್ತು ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೆಮಿಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಖಾಸಗಿ ದೇವಾಲಯವಾಗಿದ್ದು, ಪ್ರತಿವರ್ಷ ಇಲ್ಲಿ ಮಕರ ಸಂಕ್ರಾಂತಿಯ ನಂತರ ದ್ರೌಪತಿ ದೇವಾಲಯದಲ್ಲಿ ಉತ್ಸವ ಮಾಡಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ಭಕ್ತರು ದೇವರಿಗೆ ಹಾರ ನೀಡುತ್ತಾರೆ. ಅದನ್ನು ಮೂರ್ತಿಗೆ ಹಾಕಲು, ವಿಗ್ರಹದ ಬಳಿ ಕೆಲ ಜನರು ನಿಂತಿರುತ್ತಾರೆ. ಸಾಮಾನ್ಯವಾಗಿ ಟ್ರ್ಯಾಕ್ಟರ್ ಅಥವಾ ಬೇರೆ ಗಾಡಿಗಳಲ್ಲಿ ವಿಗ್ರಹದ ಮೆರವಣಿಗೆ ಮಾಡಲಾಗುತ್ತದೆ. ಆದರೆ, ಈ ವರ್ಷ ದೇವರಿಗೆ ಮಾಲೆ ಹಾಕಲು ಕ್ರೇನ್ ಬಳಸಿದ್ದಾರೆ. ಹಾಗಾಗಿ ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ಮಾಹಿತಿ ಕೊಟ್ಟಿದ್ದಾರೆ.
ಇನ್ನೂ ರಾಣಿಪೇಟೆ ದ್ರೌಪದಿ ಅಮ್ಮನವರ ಉತ್ಸವಕ್ಕೆ ನೆರೆಯ ಹಳ್ಳಿಗಳಿಂದ ಸುಮಾರು 1,000 ಕ್ಕೂ ಹೆಚ್ಚು ಜನರು ಈ ಘಟನೆಗೆ ಸಾಕ್ಷಿಯಾಗಿದ್ದರು ಮತ್ತು ಭದ್ರತೆಗಾಗಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ.
English summary
Four people were killed and four others were injured after a crane collapsed during a temple procession in Keezhveedhi village near Nemili in Tamil Nadu’s Ranipet district ,
Story first published: Monday, January 23, 2023, 16:03 [IST]

